ಎಸ್.ಎಂ.ಜೋಸೈಮನ್ ಒಬ್ಬ ಕನ್ನಡ ಚಲನಚಿತ್ರದ ನಿರ್ದೇಶಕ ಮತ್ತು ಲೇಖಕ. ಇವರ ಪ್ರಸಿದ್ಧಿ ಪಡೆದ ಚಿತ್ರಗಳಲ್ಲಿ ಸಹೋದರರ ಸವಾಲ್(1977), ಒಂದು ಪ್ರೇಮದ ಕಥೆ(1977), ಬಂಗಾರದ ಗುಡಿ(1976) ಮೊದಲಾದವು ಇವೆ.. == ಬಾಲ್ಯ ಮತ್ತು ವೃತ್ತಿ == ಜೋ ಸೈಮನ್ ಮಂಡ್ಯದವರು.ತಮ್ಮ ಓದನ್ನು ಮಂಡ್ಯದಲ್ಲಿ ಮುಗಿಸಿದ ನಂತರ 1967 ರಲ್ಲಿ ರಗಸ್ಯ ಪೊಲೀಸ್ 115 ಮೂಲಕ ಚಲನಚಿತ್ರ ರಂಗ ಪ್ರವೇಶಿಸಿದರು.ಪ್ರಾರಂಭದಲ್ಲಿ ಅವರು . ಟಚ್ ಅಪ್ ಬಾಯ್, ಸಹಾಯಕ ಮೇಕ್ಅಪ್ ಮ್ಯಾನ್ ಮತ್ತು ಸೆಟ್ ಬಾಯ್ ಆಗಿ ಕೆಲಸ ಮಾಡಿದರು. ನಂತರ ಅವರು ನಿರ್ದೇಶನ ವಿಭಾಗದಲ್ಲಿ ಕೆಲಸ ಮಾಡಲು ಪ್ರಾರಂಭಿಸಿದರು. ಅವರು ಕೆ. ಎಸ್. ಆರ್. ದಾಸ್, ಆರ್.ಎನ್. ಜಯಗೋಪಾಲ್, ಕಣಗಾಲ್ ಪ್ರಭಾಕರ ಶಾಸ್ತ್ರಿ, ಎಸ್.ವಿ.ರಾಜೇಂದ್ರ ಸಿಂಗ್ ಬಾಬು ಮುಂತಾದ ನಿರ್ದೇಶಕರೊಂದಿಗೆ ಕೆಲಸ ಮಾಡಿದ್ದಾರೆ. . ಅವರ ಮೊದಲ ನಿರ್ದೇಶನದ ಚಿತ್ರ ಒಂದು ಪ್ರೇಮದ ಕಥೆ , ರಜನಿಕಾಂತ್ ಮತ್ತು ಎಲ್.ವಿ.ಶಾರದಾ ಅಭಿನಯಿಸಿದ್ದಾರೆ.ಅವರು ಕಥೆ, ಚಿತ್ರಕಥೆ ಮತ್ತು ಸಂಭಾಷಣೆ ಬರಹಗಾರರು ಕೂಡ. 30 ಕ್ಕೂ ಹೆಚ್ಚು ಚಲನಚಿತ್ರಗಳನ್ನು ಅವರು ನಿರ್ದೇಶಿಸಿದ್ದಾರೆ.ಅವುಗಳಲ್ಲಿ ಪ್ರಮುಖವು ಸಾಹಸಸಿಂಹ, ನ್ಯಾಯ ಗೆದ್ದಿತು , ಪ್ರೇಮ ಜಾಲ, ರವಿ ವರ್ಮ, ಊರಿಗೆ ಉಪಕಾರಿ, ನನ್ನ ರೋಷ ನೂರು ವರುಷ ಮುಂತಾದವು..ಅವರ ಪುತ್ರರಾದ ರಾಜೇಂದ್ರ ಸೈಮನ್ ಮತ್ತು ಜೀತೆಂದ್ರ ಸೈಮನ್ ಇಬ್ಬರೂ ನಟರಾಗಿದ್ದಾರೆ. == ಚಿತ್ರ ಲೋಕ == ಜೋ ಸೈಮನ್ ಸುಮಾರು ೮೫ ಕನ್ನಡ ಚಲನ ಚಿತ್ರಗಳಲ್ಲಿ ಕೆಲಸ ಮಾಡಿದರು. === ನಟನಾಗಿ === === ನಿರ್ದೇಶಕನಾಗಿ === === ಲೇಖಕನಾಗಿ === === ನಿರ್ಮಾಪಕನಾಗಿ === ಒಡೆದ ಹಾಲು (೧೯೮೪) ಮಹಾಪುರುಷ (೧೯೮೫) ಕೃಷ್ಣಾರ್ಜುನ (೨೦೦೦) == ಪ್ರಶಸ್ತಿಗಳು == ಕರ್ನಾಟಕ ಚಾಲನಚಿತ್ರ ಅಕಾಡೆಮಿ ಅವರ ಜೀವಿತಾವಧಿ ಸಾಧನೆ ಗುರುತಿಸಿ ೨೦೧೩ ರಲ್ಲಿ ಬಿ.ಆರ್.ಪಂತುಲು ಪ್ರಶಸ್ತಿಯನ್ನು ನೀಡಿ ಗೌರವಿಸಿದೆ., == ಉಲ್ಲೇಖಗಳು == == ಬಾಹ್ಯ ಕೊಂಡಿಗಲು == ಜೋ ಸೈಮನ್ ಐ ಎಮ್ ಡಿ ಬಿನಲ್ಲಿ